ಕೊಂಬಿಲ್ಲದ ಹಸುಗಳ ಸೃಷ್ಟಿ !

ಕೊಂಬಿಲ್ಲದ ಹಸುಗಳ ಸೃಷ್ಟಿ !

ಸಾಮಾನ್ಯವಾಗಿ ನಾವು ಮೇಕೆ, ಹೋತ, ಟಗರು, ಹಸು, ಹೋರಿ, ಜಿಂಕೆ, ಎತ್ತು, ಎಮ್ಮೆ ಮುಂತಾದ ಕೊಂಬುಗಳ್ಳುಳ್ಳ ಪ್ರಾಣಿಗಳನ್ನು ಸಾಕುತ್ತೇವೆ. ಕೆಲವು ಪ್ರಾಣಿಗಳ ಕೊಂಬುಗಳು ಪ್ರಾಣಾಂತಿಕ ಭಯವನ್ನು ಸೃಷ್ಟಿಸಿದರೆ, ಕೆಲವು ವ್ಯಕ್ತಿಗಳಿಗೆ ಇರಿದು ಅಪಾಯವನ್ನುಂಟು ಮಾಡುತ್ತವೆ. ಕೆಲವಂತೂ ಸಾಯಿಸಿಯೇ ಬಿಡುತ್ತವೆ. ಕೊಂಬುಳ್ಳ (ಭೀಕರವಾದ ) ಪ್ರಾಣಿಗಳಂದರೆ ಹಾಯಬಹುದೆಂಬ ಭಯ ಎಲ್ಲರಿಗೂ ಇದ್ದೆ ಇರುತ್ತದೆ. ಸಾಕಲೇಬೇಕೆಂಬ ಅನಿವಾರ್ಯತೆ ಕೂಡ ಇರುತ್ತದೆ.

ಕೊಂಬಿಲ್ಲದೇ ಹುಟ್ಟಬಹುದಾದ ಪ್ರಾಣಿಗಳಿದ್ದರೆ ಹೇಗೆ ಈ ಬಗೆಗೆ ವಿಜ್ಞಾನಿಗಳು ಚಿಂತನೆ ನಡೆಯಿಸಿ ಕೊನೆಗೂ ಯಶಸ್ವಿಯಾಗಿದ್ದಾರೆ. ಈಗ ತಳಿ ತಂತ್ರಜ್ಞಾನದಿಂದಾಗಿ ಕೊಂಬಿಲ್ಲದ ಹಸುಗಳನ್ನು ತಮಗಿಷ್ಟವಾದ ಬಣ್ಣದಲ್ಲಿ ಹೊಂದಲು ಸಾಧ್ಯವಿದೆ, ಎಂದು ಖಚಿತಪಡಿಸಲಾಗಿದೆ. ಮೈಕ್ರೋಸೆಟೆಲೈಟ್ ಎನ್ನುವ ಡಿ. ಎನ್. ಎ. ಈ ಕೊಂಬಿನ ಬೆಳವಣಿಗೆಗೆ ಕಾರಣವೆಂದು ತಿಳಿದಾಗಿದೆ. ಈ ಡಿ.ಎನ್.ಎ. ಅನ್ನು ಕಟ್ಟಿಹಾಕಲು ಕೃತಕ ತಳಿಯಾಂತಕನನ್ನು (ಜೆನಿಟಕ್ ಮಾರ್ಕರ್‍ಸ್) ತಯಾರಿಸಿ ನೀಡಲಾಗುತ್ತದೆ. ಕೊಂಬಿಲ್ಲದ ಕೆಲವು ಜಾತಿಯ ಪ್ರಾಣಿಗಳಲ್ಲಿ ಕಾಣಬಂದ ವಿದ್ಯಾಮಾನವನ್ನು ಬಳಕೆಗೆ ಅಷ್ಟೇ ತರಲಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಹೀಗೆ ಕೆಲವು ಜೀವಿಗಳಲ್ಲಿರುವ ಅಂಗಾಂಗಗಳ ಮೂಲ ಜೆನಿಟಕ್ಸ್‌ನ್ನು ಕಂಡು ಹಿಡಿದು ಅದು ಪೂರೈಸದಂತೆ ಮಾಡಿ ಬೇಡವಾದ ಅಂಗಾಂಗಗಳನ್ನು ಬೆಳೆಯದಂತೆ ಮುಂದೆ ಮಾಡಬಹುದೇನೊ? ಕಾಲಾಯತಸ್ಮೈನಮಃ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಜಗದೊಳೆಲ್ಲರೊಪ್ಪುವ ಮಾತನಾಡಿದವರುಂಟೇ ?
Next post ಏಕೆ? ಹೆಂಡತಿ..

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys